Thursday, March 19, 2015

Tuesday, March 17, 2015

ಸಾಕ್ಷಿ-ಬಳಗದಿಂದ ಕುಮಾರವ್ಯಾಸ ಮಹಾಕವಿಯ ಕರ್ಣಾಟ ಭಾರತ ಕಥಾ ಮಂಜರಿ ಕಾವ್ಯಾಸ್ವಾದ ಕಾರ್ಯಕ್ರಮವು ವಿಶಿಷ್ಟ ಪ್ರಯೋಗವಾಗಿ ದಾಖಲಾಯಿತು.

 
ಆರಂಭದಲ್ಲಿ ಶಿಕ್ಷಕಿ ಸುಧಾ ಭಂಡಾರಿ ಭಾವಗೀತೆ ಪ್ರಸ್ತುತ ಪಡಿಸಿದರು.
ಅಧ್ಯಕ್ಷತೆವಹಿಸಿದ್ದ ವಿದ್ವಾಂಸರಾದ ಎನ್.ಆರ್.ನಾಯಕರವರು ಕಾಯಱಕ್ರಮ
ವನ್ನು ಮೆಚ್ಚಿ ಮಾತನಾಡಿ ಸಾಹಿತ್ಯ ಸಮ್ಮೇಳನಕ್ಕಿಂತ ಹೆಚ್ಚಿಗೆ ಸೇರಿರುವ ನಿಮ್ಮ ಆಸಕ್ತಿ ನಿರಂತರವಾಗಿರಲಿ ಎನ್ನುತ್ತ ಕುಮಾರವ್ಯಾಸನ ಕೆಲ ಪದ್ಯಗಳನ್ನು ಮನ ಮುಟ್ಟುವಂತೆ ವಿವರಿಸಿದರು.



 ಆಸಕ್ತಿಯಿಂದ ಸಾಕ್ಷಿ ಬಳಗದ ಶಿಕ್ಷಕರೊಂದಿಗೆ ಸಿ.ಆರ್.ಪಿಗಳೂ ಭಾಗವಹಿಸಿದ್ದರು.
 ಶ್ರೀಮತಿ ಸುನಂದಾ ಭಟ್ -ಶಿಕ್ಷಕ ಸಂಘದ ಪ್ರತಿನಿಧಿಗಳು ಅತಿಥಿಗಳಾಗಿ ಭಾಗವಹಿಸಿ ಶಿಕ್ಷಕ ಹರಿಶ್ಚಂದ್ರ ನಾಯ್ಕರೊಂದಿಗೆ ಕಾರ್ಯಕ್ರಮದ ವೆಚ್ಚ ಭರಿಸಿದರು.
 ಭಟ್ಕಳದ ಕ್ಷೇತ್ರ ಸಮನ್ವಯಾಧಿಕಾರಿ ವಿ.ಡಿ ಮೊಗೇರರವರು ಕಾರ್ಯಕ್ರಮದ ಬಗ್ಗೆ ಮೆಚ್ಚುಗೆಯ ಮಾತನಾಡಿದರು.
 ಆಸಕ್ತಿಯಿಂದ ಪಾಲ್ಗೊಂಡ ಸಾಕ್ಷಿ ಬಳಗದ ಶಿಕ್ಷಕರು.
ಕಾವ್ಯದ ಗಾಯನ ಮತ್ತು ಅರ್ಥ ವಿವರಣೆ ನೀಡಿದ ಸಿ.ಆರ್.ಪಿ ವಿ.ಜಿ ನಾಯ್ಕ, ಶಿಕ್ಷಕರಾದ ರಾಜೇಶ ನಾಯಕ, ಹರಿಶ್ಚಂದ್ರ ನಾಯ್ಕ ಹಾಗೂ ಬಿ.ಆರ್.ಪಿ ಶಂಕರ ಹರಿಕಾಂತರವರು ಹೊಸದೊಂದು ಪ್ರಯೋಗಕ್ಕೆ ಸಾಕ್ಷಿಯಾಗುವಂತೆ ಮಾಡಿದರು.